ಬೆಂಗಳೂರಿನ ಜಯನಗರದ ಮಾರುಕಟ್ಟೆಯಲ್ಲಿ ಸಂಜೆಯ ಸಮಯ ಮಾರಾಟಕಿಟ್ಟಿದ್ದ
ಹೂಗಳ ಮನೋಹರವಾದ ನೋಟ ಮನಸ್ಸಿಗೆ ಬಹಳ ಮುದವೆನ್ನಿಸಿತು.
ಆಗ ಮನದಲ್ಲಿ ಮೂಡಿದ ಕೆಲವು ಸಾಲುಗಳು ಒಂದುವಾರದ ತಿಣುಕಾಟದ
ನಂತರ ಒಂದು ರೂಪ ಪಡೆದಿವೆ.
ಮೊಗ್ಗು ಬಿರಿದ ಮಲ್ಲಿಗೆ
ಸಂಪಿಗೆ ಶೇವಂತಿಗೆ
ಕನಕಾಂಬರ ಕೆಂಗುಲಾಬಿ
ಕಂಗೊಳಿಸುವ ಮಾಲೆಯಾಗಿ
ಸೊಂಪಾಗಿ ಸೊಗಯಿಸುತ್ತ
ಕಂಪು ಸೂಸಿ ಕುಳಿತುದೇಕೆ ?ಹರಿಯ ಕೊರಳ ಸುತ್ತ ಸುಳಿದು
ಒಲುಮೆಯಿಂದ ಪಾದಕಿಳಿದು
ನಲುಮೆಯಿಂದ ನಮಿಸಬೇಕೇ ?
No comments:
Post a Comment