ಬೆಳಗ್ಗೆ ಉದಯಕಾಲದ ಸಮಯಕ್ಕೆ ನಮ್ಮ ಬಾಲ್ಕನಿಗೆ ಬಂದರೆ, ನಮ್ಮ ಎದುರಿನಲ್ಲಿ ಇರುವ ಮರಗಳ
ಮರೆಯಿಂದ ನಮಗೆ ಸೂರ್ಯೋದಯ ಕಾಣಬರುವುದು ಹೀಗೆ. ಸೂರ್ಯ ಉದಯಿಸುತ್ತಾನೆ ಪ್ರತಿದಿನ.
ಭಾವನೆಗಳು ಉದಯಿಸಿ ಸಾಲುಗಳು ಮೂಡುತ್ತವೆ ಒಂದೊಂದುದಿನ !
ವೈರಸ್ ಕಾರ್ಮೋಡದ ಮಧ್ಯದಿಂದ ಸುದಿನಗಳ ಆಶೆಯ ರವಿಕಿರಣಗಳು ತೂರಿಬರಲೆಂದು ಆಶಿಸುತ್ತಾ
ಇಂದಿನ ಎರಡುಸಾಲುಗಳನ್ನು ತಮ್ಮ ಮುಂದಿಟ್ಟಿದ್ದೇನೆ.
ಅದೇ ದಿಕ್ಕು
ಅದೇ ಜಾಗ
ಅದೇ ಸಮಯ
ಆಕಾರ, ಬಣ್ಣ.
ಕಾಣುತ್ತೇನೆ ದಿನದಿನ
ಇವನು ಹುಟ್ಟುವುದನ್ನ.
ಆದರಿಲ್ಲಿ ನೋಡಿ,
ಇವನ
ಹೆಚ್ಚುಗಾರಿಕೆಯನ್ನ,
ಶತ ಶತಮಾನ
ಸಾವಿರಾರು ಜನ
ಬರೆದು ಬರೆದು
ಸುರಿದರೂ
ತೀರದು ಇವನ
ಗುಣಗಾನ !
No comments:
Post a Comment