![]() |
ಮೋಡ ಮುಚ್ಚಿದ ಮುಂಜಾನೆ
ಮೋರೆ ಮುಚ್ಚಿಕೊಂಡಿದ್ದ ಸೂರ್ಯ
ಮುಗಿಲ ಕೆಂಪಾಗಿಸ ಮರೆತಾಗ ಮನೆಯ ಮುಂದಿನ ಮರ ಮನಬಿಚ್ಚಿ ತನ್ನ ಕೆಂಪನ್ನಿತ್ತು ಮನವ ಮುದಗೊಳಿಸಿತು |
![]() |
ಸದ್ದಿಲ್ಲದೆ ಸೂರ್ಯ ಮೂಡಣದೊಳೆದ್ದಿಹನು ನಿದ್ದೆ ಕದ್ದೊಯ್ಯಲೆಂದು ! |
![]() |
ದಿನಕ್ಕಿಂತ ಚಳಿ
ಇಂದು ಕೊಂಚ ಹೆಚ್ಚು.
ಸೂರ್ಯನೂ ಮುದುರಿ
ಮಲಗಿದ್ದಾನೆ
ತೆಳ್ಳನೆಯ ಮೋಡಗಳ
ಹಚ್ಚಡ ಹೊದ್ದು.
ಅವನಿಗುಂಟು ಆ ಸ್ವಾತಂತ್ರ್ಯ
ನಮಗುಂಟೆ?
ಘಂಟೆಯ ದಾಸರಿಗೆ ?
ಎಂಟಾಗುತ್ತ ಬಂತು ಉಂಟು ಹದಿನೆಂಟು ಕೆಲಸ ಹೊಂಟೆ ನೆಂಟರೆ ಶುಭದಿನ ನಿಮಗೆ |
No comments:
Post a Comment