ದಟ್ಟವಾಗಿ ಬೆಳೆಯಲೆಂದು
ಘಟ್ಟಿಯಾದ ಬೇಲಿಯೊಂದ
ಕಟ್ಟಿದೆವು ಸುತ್ತಲೂ
ಗಿಡ ಉಳಿಯಲಿಲ್ಲ
ಬಿಡಿ, ಪರವಾಗಿಲ್ಲ
ಬೇಲಿಯಾದರೂ
ಬೆಳೆಯಿತಲ್ಲ !
ತೆಂಗು - ರಂಗು
ಅದೇ ಸಂಜೆ
ಅದೇ ಸೂರ್ಯ
ಅದೇ ತೆಂಗು
ಅದೇ ರಂಗು
ಅದಕೆ
ಪ್ರಕೃತಿಯಿತ್ತ ಮೆರಗು
ಎನಗೆ
ನಿತ್ಯದ ಬೆರಗು !
‘ಪಕ್ಷಪಾತಿ ಸೂರ್ಯ’ ಅಲ್ಲಿಯೂ ಇದೇ ಸೂರ್ಯನೇ. ಇಲ್ಲಿ ಮೂಡುವಂತೆಯೇ ಅಲ್ಲಿಯೂ ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ ಇಲ್ಲಿ ಸುಂದರವಾದ ಸಾಲು ಮನೆಗಳ ನಡುವೆ ...
No comments:
Post a Comment